ಅಯಿವರ ಮುಖದಲ್ಲಿ ಆರುಮಂದಿ ಹುಟ್ಟಿ ಎಲ್ಲರಿಗೆ ಕೈಯಾಗಿಪ್ಪುದು ನೋಡಾ. ಹಲವರ ಕೈಯಯೊಳಗಿಪ್ಪ ಒಬ್ಬ ಚಾಂಡಾಲಗಿತ್ತಿ ಮೂರು ಮುಖದಲ್ಲಿ ಆರೂಢರ ನುಂಗಿದಳು ನೋಡಾ. ಹಲವು ಕೈಗಳ ಹಾರಹೊಯಿದು ಮೂರುಮುಖದಂಗನೆಯರ ಶಿರವ ನೆರೆ ಮೆಟ್ಟಿ ನಿಲ್ಲಬಲ್ಲರೆ ಆತನು ನಿರ್ಮಾಯನು ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.