ಅಯ್ಯ
!
ಆಗಮಿಕನಲ್ಲಿ
ವೇದಪಾಠಕನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ತರ್ಕನಲ್ಲ
ವ್ಯಾಕರಣನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಶಾಸ್ತ್ರಜ್ಞನಲ್ಲ
ಪುರಾಣಿಕನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ವಾದಿಯಲ್ಲ
ಉಪನೀತಿಯಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಮಾತಿನವನಲ್ಲ
ಮಥನದವನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ನೀತಿಯವನಲ್ಲ
ಖ್ಯಾತಿಯವನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ರತಿಯವನಲ್ಲ
ವಿರತಿಯವನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಹೆಣ್ಣು
ರೂಪನಲ್ಲ
ಗಂಡು
ರೂಪನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ನಾಮದವನಲ್ಲ
ಸೀಮೆಯವನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಆಕ್ರಿಯದವನಲ್ಲ
ದುಃಕ್ರಿಯದವನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಶ್ವಾನಜ್ಞಾನಿಯಲ್ಲ
ಕುಕ್ಕಟಜ್ಞಾನಿಯಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಆಶನಿಯಲ್ಲ
ವ್ಯಸನಿಯಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಇಂತು
ಉಭಯ
ಭಿನ್ನನಾಮವಳಿದ
ಸಂಗನ
ಬಸವಣ್ಣನ
ಕರ
ನಯನ
ಮುಖದಲ್ಲಿ
ಬೆಳಗುವ
ಚಿಜ್ಯೋತಿ
ತಾನೆ
ನೋಡ!
ನಿರವಯಶೂನ್ಯಲಿಂಗಮೂರ್ತಿ
ಚೆನ್ನಬಸವಣ್ಣ.