Pages   (key to Page Status)   


ಅಯ್ಯ
!
ಸಮಸ್ತ
ಆತ್ಮರು
ರತಿಸಂಯೋಗದಿಂದ
ಗರ್ಭಿಣಿಯಾದಲ್ಲಿ
ಹೆಣ್ಣು
ಗಂಡೆಂಬ
ನಾಮ_ರೂಪ_ಕ್ರಿಯೆಗಳು
ಕಾಣಿಸಿಕೊಳ್ಳದಂತೆ;
ಬಾಲ
ಶಿಶುವಿನೊಳಗೆ
ಯೌವನವಡಗಿರ್ಪಂತೆ;

ಯೌವನದೊಳಗೆ
ಮುಪ್ಪು
ಅಡಗಿರ್ಪಂತೆ;

ಮುಪ್ಪಿನೊಳಗೆ
ಜನನ-ಮರಣ_ಸ್ಥಿತಿ
ಅಡಗಿರ್ಪಂತೆ;

ಜನನ
ಮರಣ
ಸ್ಥಿತಿಯೊಳಗೆ
ಸಕಲ
ಭೋಗಂಗಳಡಗಿರ್ಪಂತೆ;
ಸರ್ವಜೀವದಯಾಪರತ್ವವುಳ್ಳ
ಸದ್ಭಕ್ತ
ಶಿವಶರಣಗಣಂಗಳಲ್ಲಿ
ಮುಗಿಲ
ಮರೆಯ
ಸೂರ್ಯನಂತೆ
ನೆಲದ
ಮರೆಯ
ನಿಧಾನದಂತೆ;
ಒರೆಯ
ಮರೆಯ
ಅಲಗಿನಂತೆ;
ಹಣ್ಣಿನ
ಮರೆಯ
ರಸದಂತೆ
ಪರಮ
ಪಾವನಮೂರ್ತಿ
ನಿರವಯಘನವನೊಡಗೂಡಿ
ಏಕಸ್ವರೂಪಿನಿಂದ
ಗುಹೇಶ್ವರಲಿಂಗವು
ತಾನು
ತಾನಾಗಿರ್ದುದನೇನೆಂಬೆನಯ್ಯ
ಚೆನ್ನಬಸವಣ್ಣ.