ಅಯ್ಯ ಉಭಯ ಭಿನ್ನವರ್ತನಾಗುಣಂಗಳ



Pages   (key to Page Status)   


ಅಯ್ಯ ಉಭಯ ಭಿನ್ನವರ್ತನಾಗುಣಂಗಳ ತನ್ನ ಮೂಲ ಚಿತ್ಸ್ವರೂಪವಾದ ಪರಿಪೂರ್ಣ ಮಹಾಜ್ಞಾನ ಪ್ರಕಾಶದ ಬಲದಿಂ ಜಳ್ಳುಮಾಡಿ ತೂರಿ
ತನ್ನನಾದಿಸನ್ಮಾರ್ಗವ ತಿಳಿದು
ಆ ಸನ್ಮಾರ್ಗದೊಳಗೆ ನಿರಾಭಾರಿ ವೀರಶೈವ ಅನಾದಿಶರಣಸ್ವರೂಪವ ತಿಳಿದು
ಆ ಶರಣನ ನಿಜಾಚರಣೆ ಸ್ವಸ್ವರೂಪದ ನಿಲುಕಡೆಯ ಆ ಪರಿಪೂರ್ಣಜ್ಞಾನಪ್ರಕಾಶದೊಳಗೆ ಮಹದರಿವ ಸ್ವಾನುಭಾವದೃಕ್ಕಿನಿಂ ಕಂಡು
ಆ ಮಹದರಿವೆ ಗುರುವಾಗಿ
ಆ ಪರಿಪೂರ್ಣಜ್ಞಾನವೆ ಶಿಷ್ಯನಾಗಿ
ಆ ಸ್ವಾನುಭಾವ ಪ್ರಕಾಶವೆ ಲಿಂಗವಾಗಿ
ತಮ್ಮ ತಮ್ಮ ನಿಜ ಪ್ರಕಾಶಕ್ಕೆ ಪ್ರಭಾವಿಸುವ ಪರಾತ್ಪರಂಜ್ಯೋತಿ ನಿರವಯ ಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು ಸಂಗನ ಬಸವಣ್ಣನ ಅಷ್ಟದಳ
ಚೌದಳ
ಷಡ್ದಳ
ದಶದಳ
ದ್ವಾದಶದಳ
ಷೋಡಶದಳ
ದ್ವಿದಳ
ಶತದಳ
ಸಹಸ್ರದಳ
ಲಕ್ಷದಳ
ಕೋಟಿದಳಂಗಳಿಂದ ಸರ್ವಾಂಗದಿ ಶೋಭಿಸುವ ಅನಂತದಂಗಳದಲ್ಲಿ ಅನಂತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶಕ್ಕೆ ಮಿಗಿಲಾಗಿ [ಒಪ್ಪುತ್ತಿರ್ಪುದು] ನೋಡ ! ಚೆನ್ನಬಸವಣ್ಣ