ಅರಳಿಯೆಲೆಯ ಮೇಯ ಬಂದ ಎರಳೆ ಹಾರಿಬಿದ್ದುದ ಕಂಡೆನಯ್ಯ. ಅರಳಿಯೆಲೆಯ ಹರಿಯಲು ಎರಳೆ ಎದ್ದೋಡಿತ್ತು ನೋಡಾ. ಓಡಿಹೋದ ಎರಳೆ ಅಡಗಿದ ಠಾವ ಬಲ್ಲರೆ ಪ್ರಾಣಲಿಂಗ ಸಂಬಂಧಿಗಳೆಂಬೆ ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.