ಅರಳಿಯ ಮರದೊಳಗಿರುವ ಅರಗಿಳಿಗಳಿರಾ
ನಮ್ಮ ಅಖಂಡೇಶ್ವರನ ಕಂಡರೆ ಹೇಳಿರೆ ! ಮಾವಿನ ಮರದೊಳಗೆ ಕೂಗುವ ಕೋಗಿಲೆ ಹಿಂಡುಗಳಿರಾ
ನಮ್ಮ ನಾಗಭೂಷಣನ ಕಂಡಡೆ ಹೇಳಿರೆ! ಕೊಳನ ತೀರದಲಾಡುವ ಕಳಹಂಸಗಳಿರಾ
ನಮ್ಮ ಎಳೆಯಚಂದ್ರಧರನ ಕಂಡಡೆ ಹೇಳಿರೆ! ಮೇಘಧ್ವನಿಗೆ ಕುಣಿವ ನವಿಲುಗಳಿರಾ
ನಮ್ಮ ಅಖಂಡೇಶ್ವರನೆಂಬ ಅವಿರಳಪರಶಿವನ ಕಂಡಡೆ ಹೇಳಿರೆ!