ಅರಿದೆನೆಂಬನ ಅರಿವೆ ನುಂಗಿತ್ತು. ಮರೆದೆನೆಂಬನ ಮರಹೆ ನುಂಗಿತ್ತು. ಇನ್ನೇನಿದ್ದುದಯ್ಯಾ ಅವಧಾನಗೆಟ್ಟು ನಡೆಯದನ್ನಕ್ಕ ! ಅರಿವಿನ ಮರಹಿನ ಕುರುಹು ತಾನಲ್ಲ ಕೂಡಲಚೆನ್ನಸಂಗಾ ಲಿಂಗೈಕ್ಯವು.