ಅರಿಯಲಿಲ್ಲದ ಅರಿವು ಮರೆಯಲಿಲ್ಲದ ಮರಹು. ನೋಟವಿಲ್ಲದ ನೋಟ ಕೂಟವಿಲ್ಲದ ಕೂಟ. ಬೆರಸಲಿಲ್ಲದ ಬೆರಗು ನಿಂದುದು ಕೂಡಲಚೆನ್ನಸಂಗಾ ಲಿಂಗೈಕ್ಯವು