ಅರಿವನರಿದು ಮರಹ ಮರೆದು ಸಂಕಲ್ಪ ಸಂಶಯವಳಿದ ನಿಲವನು ಅರಿದ ಪರಿ ಎಂತು ಹೇಳಾ ? ಅರಿದೆನೆಂದಡೆ ಜ್ಞಾನಕ್ಕೆ ದೂರ ಮರೆದೆನೆಂದಡೆ ಮನಕ್ಕೆ ದೂರ. ನಿರ್ಭಾವದ ಹೊಲಿಗೆಯಲ್ಲಿ ಭಾವಸಂಕಲ್ಪ ಬಿಡದು. ನಮ್ಮ ಗುಹೇಶ್ವರಲಿಂಗದಲ್ಲಿ ಮನಮಗ್ನಯೋಗ ನಿನಗೆಂತು ಸಾಧ್ಯವಾಯಿತ್ತು ಹೇಳಾ ಸಿದ್ಧರಾಮಯ್ಯಾ ?