ಅರಿವರತು ಬೆರಗುಹೊಡೆದು ಕುರುಹುಗೆಟ್ಟವನ ಬಂದ ಬಟ್ಟೆಯಲ್ಲಿ ಬಾರದೆ ಹೋದವನ ಕಂಗಳಲುಂಡವನ ಮನದಲ್ಲಿ ದಣಿದವನ ಕಿಚ್ಚಿಲ್ಲದೆ ಬೆಂದವನ ಅಚ್ಚಲಿಂಗೈಕ್ಯನ ಕೈಯಿಲ್ಲದೆ ಕೊಂಡವನ ಬಾಯಿಲ್ಲದೆ ಉಂಡವನ ಒಡಲಿಲ್ಲದೆ ಅವಗ್ರಹಿಸಿದವನ_ನಂಬು ಗುಹೇಶ್ವರಲ್ಲಮನ !