ಅರಿವರತು ಮರುಹು (ಕುರುಹು?)



Pages   (key to Page Status)   


ಅರಿವರತು ಮರುಹು (ಕುರುಹು?) ನಷ್ಟವಾದರೆ ಭಕ್ತ
ಆಚಾರವರತು ಅನಾಚಾರ ನಷ್ಟವಾದರೆ ಜಂಗಮ
ಅರ್ಪಿತವರತು ಅನರ್ಪಿತ ನಷ್ಟವಾದರೆ ಪ್ರಸಾದಿ
ಪ್ರಸಾದವರತು ಪದಾರ್ಥ ನಷ್ಟವಾದರೆ ಪರಿಣಾಮಿ
ಪರಿಣಾಮವರತು ಪರಮಸುಖ ನೆಲೆಗೊಂಡರೆ ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯವು.