ಅರಿವಾರಡಿಗೊಂಡುದು ಮನ ಮನದಲ್ಲಿ ಘನವಡಗಿತ್ತು ಆಶ್ರಯವಿಲ್ಲ. ಬಲ್ಲೆನೆಂಬರೆ ನೆರೆ ಅರಿತ ಅರಿವು ಘನ ಘನದಲ್ಲಿ ಆಶ್ರಯ ನಿರಾಶ್ರಯವಿಲ್ಲ ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ.