ಅರಿವಿಂದಲಾದ ಮರಹಿನ ಶಬ್ದವನರಿಯಲಾಗದು ಅರಿದಡದಕ್ಕೆ ಭವವು (ಭಂಗವು?) ಅರಿವರತು ಮರಹು ನಷ್ಟವಾಗಿ ಜ್ಞಾನ ಬೆಂದಲ್ಲಿ ನಿರ್ಣಯವೆಲ್ಲಿಯದು ? ಜ್ಞಾನದೊಳಗಣ ಬುದ್ಧಿಯ ಭಸ್ಮವಾಗಿ ಧರಿಸಿದಲ್ಲಿ ಕೂಡಲಚೆನ್ನಸಂಗಮದೇವರು ಸರ್ವನಿವಾಸಿ.