ಅರಿವಿನ ಕುರುಹಿದೇನೊ ಒಳಗೆ ಅನು(ನಿ?)ಮಿಷ ನಂದಿನಾಥನಿರಲು ? ಪೂಜಿಸುವ ಭಕ್ತನಾರೊ? ಪೂಜೆಗೊಂಬ ದೇವನಾರೊ ? ಮುಂದು ಹಿಂದು ಹಿಂದು ಮುಂದಾಡದೆ ಗುಹೇಶ್ವರ ನೀನು ನಾನು ನಾನು ನೀನಾದೊಡೆ ?