ಅರಿವಿನ ನಿರಿಗೆಗಾಣದೆ ಗಿರಿಯ ಕೋಡುಗಲ್ಲ ಮೇಲೆ ತಲೆಯೂರಿ ತಪಸ್ಸು ಮಾಡಿದಡಿಲ್ಲ
ಇಲ್ಲದ ಕಾಲಕ್ಕಿಲ್ಲ
ಗಾತ್ರವ ದಂಡಿಸಿದಡಿಲ್ಲ ಪೃಥ್ವಿಯ ತಿರುಗಿದಡಿಲ್ಲ
ತೀರ್ಥಂಗಳ ಮಿಂದು ನಿತ್ಯನೇಮಂಗಳ ಮಾಡಿ ಜಪಸಮಾಧಿಯಲ್ಲಿ ನಿಂದಡಿಲ್ಲ
``ಪೂಜಾಕೋಟಿಸಮಂ ಸ್ತೋತ್ರಂ
ಸ್ತೋತ್ರಕೋಟಿಸಮಂ ಜಪಃ ಜಪಕೋಟಿ ಸಮಂ ಧ್ಯಾನಂ
ಧ್ಯಾನಕೋಟಿರ್ಮನೋ ಲಯಃ_ ಎಂದುದಾಗಿ
ಸುತ್ತಿಸುಳಿವ ಮನವ ಚಿತ್ತಿನಲ್ಲಿರಿಸಿ
ಚಿತ್ತು ಲಯವಾದಡೆ ನಿತ್ಯಪ್ರಕಾಶ ! ಗುಹೇಶ್ವರಲಿಂಗವ ಮತ್ತೆ ಅರಸಲುಂಟೆ ?