ಅರಿವುವಿಡಿದು
ಅರಿವನರಿದು ಅರಿವೆ ನೀವೆಂಬ ಭ್ರಾಂತು ಎನಗಿಲ್ಲವಯ್ಯಾ ಮರಹುವಿಡಿದು ಮರಹ ಮರೆದು ಮರಹು ನೀವೆಂಬ ಮರಹಿನವ ನಾನಲ್ಲವಯ್ಯಾ. ದೇಹ ಪ್ರಾಣಂಗಳ ಹಿಂಗಿ ದೇಹವಿಡಿದು ದೇಹ ನಿಮ್ಮದೆಂಬ ಭ್ರಾಂತುಸೂತಕಿ ನಾನಲ್ಲವಯ್ಯಾ. ನಿಮ್ಮ ಅರಿದ ಅರಿವ ಭಿನ್ನವಿಟ್ಟ ಕಂಡೆನಾದಡೆ ನಿಮ್ಮಾಣೆ ಕಾಣಾ ಕೂಡಲಸಂಗಮದೇವಾ.