ಅರಿವು ನಾಸ್ತಿಯಾದುದೆ ಗುರು ಕುರುಹು ನಾಸ್ತಿಯಾದುದೆ ಲಿಂಗ ಕಾಯಗುಣ ನಾಸ್ತಿಯಾದುದೆ ವಿಭೂತಿ ಕರಣಗುಣನಾಸ್ತಿಯಾದುದೆ ರುದ್ರಾಕ್ಷಿ ಮರಣ (ಮರಹು?) ನಾಸ್ತಿಯಾದುದೆ ಮಂತ್ರ- ಇಂತೀ ಪಂಚಾಚಾರಪ್ರತಿಷೆ*ಯುಳ್ಳಾತನೆ ಕೂಡಲಚೆನ್ನಸಂಗಯ್ಯನಲ್ಲಿ ಸದಾಚಾರಿ.