ಅರಿವು ಮುಂತಾಗಿ ಕೊಂಬುದು ಪ್ರಸಾದವಲ್ಲ ಲಿಂಗ ಮುಂತಾಗಿ ಕೊಂಬುದು ಪ್ರಸಾದವಲ್ಲ ಜಂಗಮ ಮುಂತಾಗಿ ಕೊಂಬುದು ಪ್ರಸಾದವಲ್ಲ ಸಯಜ್ಞಾನವಳಿದರೂ ಪ್ರಸಾದವಲ್ಲ ಇವು ಏನೂ ಪ್ರಸಾದವಲ್ಲ ಸಹಜಪ್ರಸಾದವೆ ಬೇಕು. ಅಂತಪ್ಪ ಪ್ರಸಾದಿಯ ತೋರಿ ಬದುಕಿಸಯ್ಯಾ ಕೂಡಲಚೆನ್ನಸಂಗಮದೇವಾ.