ಅರಿವ ಆತ್ಮ; ಕಂಗಳ ಮರೆಯಲ್ಲಿ ಕಾಂಬಂತೆ ಕಿವಿಯ ಮರೆಯಲ್ಲಿ ಕೇಳುವಂತೆ_ ಕಂಗಳು ನಷ್ಟವಾದಲ್ಲಿ ಕರ್ಣ ಬಧಿರವಾದಲ್ಲಿ ಕಾಂಬುದು ಕೇಳುವುದು ಅಲ್ಲಿಯೆ ನಿಂದಿತ್ತು. ಆತ್ಮನ ಅರಿವಾವುದು ? ಗುಹೇಶ್ವರನೆಂಬ ಕುರುಹಾವುದು; ಅಂಬಿಗರ ಚೌಡಯ್ಯ ?