ಅರ್ಥದ ಭಕ್ತಿ ಉತ್ತರಿಸಿ ಹೋಯಿತ್ತು ಅರಸು ಭಕ್ತಿ `ನಿಲ್ಲು ಮಾಣು' ಎಂದಲ್ಲಿ ಹೋಯಿತ್ತು ಆಚರಣೆಯ ಭಕ್ತಿ ಅಡಗಿ ಹೋಯಿತ್ತು ಕೂಡಲಚೆನ್ನಸಂಗಮದೇವರಲ್ಲಿ ಕೀಟಕರು ಹೆಚ್ಚಿ ಪುರಾತರು ಅಡಗಿಹೋದರು