ಅರ್ಥಪ್ರಾಣಾಭಿಮಾನವನು ಗುರು ಲಿಂಗ ಜಂಗಮದ ಮುಖಕ್ಕೆ ಸಮರ್ಪಿಸಿ ಆ ಗುರು ಲಿಂಗ ಜಂಗಮವೆ ತನು ಮನ ಪ್ರಾಣವಾಗಿರಬಲ್ಲರೆ ಭಕ್ತನ ಸ್ಥಲವಿದೆಂಬೆನಯ್ಯಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.