ಅರ್ಪಿತವೆಂದರೆ ಅನರ್ಪಿತವಾಯಿತ್ತು ಅನರ್ಪಿತವೆಂದರೆ ಅರ್ಪಿತವಾಯಿತ್ತು. ಗುರುವೆಂದರೆ ಶಿಷ್ಯನಾಯಿತ್ತು ಶಿಷ್ಯನೆಂದರೆ ಗುರುವಾಯಿತ್ತು. ಗುರುಶಿಷ್ಯ ಸಂಬಂಧ ಕ್ರೀ ಪ್ರತಿಭಾವವುಳ್ಳನ್ನಕ್ಕ ಘನಲಿಂಗೈಕ್ಯವೆಲ್ಲಿಯದೊ ? ಕೂಡಲಚೆನ್ನಸಂಗಮದೇವಾ ?