ಅರ್ಪಿತ ಭುಂಜಕನ
ಪ್ರಸಾದ ಭುಂಜಕನ ಪರಿ ಬೇರೆ
ಅರ್ಪಿತವೆಂದು ಸ್ಥೂಲ ಸೂಕ್ಷ್ಮವೆಂದೆನ್ನದೆ ಘನಕ್ಕೆ ಘನ ಮಹಾಘನ ಕಾಯ ಜೀವವೊಂದಯ್ಯಾ. ಅರ್ಥ ಪ್ರಾಣ ಅಭಿಮಾನ ಸವೆದಡೆ ಸಮಭೋಗರುಚಿಪ್ರಸಾದಿ. ಈ ಉಭಯಲಿಂಗದ ಮಹಿಮೆಯನು ಇನ್ನುಪಮಿಸಬಾರದು. ರೂಹಿಸಿ ಭಾವಿಸಿ ಗುಣಪ್ರಪಂಚವನತಿಗಳೆದು ನಿರ್ವಿಕಲ್ಪಿತನಾದಾತ ಆನೆಂಬ ಶಬ್ದವಳಿದುಳಿದ ಪ್ರಸಾದಗ್ರಾಹಕ ನಿಂದ ನಿಲುವು
ಪರತಂತ್ರ ಪರಿಭಾವ ಪ್ರಪಂಚುವ ಬಿಟ್ಟು ಘನರವಿಲೋಚನನಾಗಿ
ಅರ್ಪಿತ ಭುಂಜಕನಲ್ಲ
ಆದಿವಿಡಿದಾಗಮನಲ್ಲ. ಅರ್ಪಿತ ಅನರ್ಪಿತರಹಿತ ಕೂಡಲಚೆನ್ನಸಂಗನಲ್ಲಿ ಆತ ದಿಟಪ್ರಸಾದಿ.