ಅಳಿಯಗೂಳಿಗೆ ಹೋದಾತ ಅತ್ತೆಯ ನೆರೆದರೆ ನಾದಿನಿಯರು ನೋಡಿ ಸೋಜಿಗವ ಮಾಡುತ್ತಿದಾರೆ ನೋಡಾ. ನಾದಿನಿಯರ ತಾಯಿ ಅತ್ತೆಯ ಕೊಂದು ಅಳಿಯನ ನುಂಗಿ ಪರಪುರುಷನ ನೆರೆದು ಮುತ್ತೆ ೈದೆಯಾದುದು ಸೋಜಿಗ ಸೋಜಿಗ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.