ರಾಗ : ಷಣ್ಮುಖಪ್ರಿಯ
ತಾಳ: ಏಕ
( ಅಳಿಸಂಕುಲವೆ ಮಾಮರನೆ ಬೆಳದಿಂಗಳೆ ಕೋಗಿಲೆಯೆ ) ೨
( ನಿಮ್ಮೆಲ್ಲರನು ಒಂದ ಬೇಡುವೆನು ) ೨
(ಎನ್ನೊಡೆಯ ಚನ್ನಮಲ್ಲಿಕಾರ್ಜುನದೇವರ ಕಂಡರೆ
ಕರೆದು ತೋರಿರೆ ) ೨
( ಚಿಲಿಮಿಲಿ ಎಂದೋದುವ ಗಿಳಿಗಳಿರ
ನೀವು ಕಾಣಿರೆ , ನೀವು ಕಾಣಿರೆ
ಸರವರದೊಳಗಾಡುವ ಹಂಸಗಳಿರ
ನೀವು ಕಾಣಿರೆ , ಕಾಣಿರೆ ) ೨
( ಸರವೆತ್ತಿ ಪಾಡುವ ಕೋಗಿಲೆಗಳಿರಾ
ನೀವು ಕಾಣಿರೆ , ನೀವು ಕಾಣಿರೆ
ಎರಗಿ ಬಂದಾಡುವ ತುಂಬಿಗಳಿರಾ
ನೀವು ಕಾಣಿರೆ , ಕಾಣಿರೆ ) ೨ || ಚಿಲಿಮಿಲಿ ||
( ಗಿಡಗಹ್ವರದೊಳಗಾಡುವ ನವಿಲುಗಳಿರಾ
ನೀವು ಕಾಣಿರೆ
ಚನ್ನಮಲ್ಲಿಕಾರ್ಜುನದೇವನು ಎಲ್ಲಿದ್ದಾನೆಂಬುದು ಬಲ್ಲಡೆ
ನೀವು ಹೇಳಿರೆ , ಹೇಳಿರೆ ) ೨ || ಚಿಲಿಮಿಲಿ ||
( ನೀವು ಕಾಣಿರೆ ಚನ್ನಮಲ್ಲಿಕಾರ್ಜುನನೆಲ್ಲಿ ಹೇಳಿರೆ ) ೨