ಅವಸರ ಮಾದ ಬಳಿಕ ಅಂಗಭೋಗಂಗಳನೆಲ್ಲವ ಮರೆಯಬೇಕು. ಅದ ಮೀರಿದ ಘನವು ಅಗಮ್ಯವಾಯಿತ್ತು. ಅದನರಿಯಬಾರದು ಅಂತಿರಲಿ- ನಾನು ನೀನೆಂಬ ಭ್ರಾಂತುಳ್ಳನ್ನಕ್ಕ ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಬೇಕು ಕೂಡಲಚೆನ್ನಸಂಗಯ್ಯಾ ಇದ ಮಾಡದಿದ್ದಡೆ ನಾಯಕನರಕ