ಅವಿಶ್ವಾಸಲೋಕದ ಕರ್ಮಿಗಳಿಗೆ ಯಮದೂತರೆಂಬ ದಂಡಣೆಯ ಮಾಡಿದೆಯಯ್ಯಾ. ಶಿವಭಕ್ತರಿಗೆ ಶಿವದೂತರೆಂಬ ದಂಡಣೆಯ ಮಾಡಿದೆಯಯ್ಯಾ. ಇದು ಕಾರಣ ಭಕ್ತಿಯನರಿಯೆ ಯುಕ್ತಿಯನರಿಯೆ ಜಂಗಮವೆ ಕೂಡಲಚೆನ್ನಸಂಗಯ್ಯನೆಂಬೆ.