ಅಷ್ಟದಳಕಮಲದ ಆತ್ಮನೊಳಗೆ ಸೃಷ್ಟಿ

Title vachana saahitya
Author Akka Mahaadevi
Year 1130-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])

ಅಷ್ಟದಳಕಮಲದ ಆತ್ಮನೊಳಗೆ ಸೃಷ್ಟಿ ಜನಿಸಿ
ಕೂರುಮ ದಿಗುದಂತಿ ದಿಗುವಳಯವ ನುಂಗಿ
ನಿಜಶೂನ್ಯ ತಾನಾದ ಬಳಿಕ
ತನ್ನ ತಾನರಿದ ನಿಜಪದ ಭಿನ್ನಯೋಗಕ್ಕೆ ಬಹುದೆ? ಕಂಗಳ ನೋಟದಲ್ಲಿ ಮನದ ಸೊಗಸಿನಲ್ಲಿ
ಅನಂಗನ ದಾಳಿಯನಗಲಿದೆನಣ್ಣಾ. ಮರೀಚಿಕಾಜಲದೊಳಡಗಿದ ಪ್ರಾಣಿ ವ್ಯಾಧನ ಬಲೆಯೊಳಗಹುದೆ? ಎನ್ನದೇವ ಚೆನ್ನಮಲ್ಲಿಕಾರ್ಜುನನಲ್ಲದೆ ಪರಪುರುಷರು ನಮಗಾಗದಣ್ಣಾ.