ಅಷ್ಟದಳಕಮಲದ ಮೇಲಣ ನಿಃಶೂನ್ಯದ ವರ್ಮವನರಿಯದ ಅಂಧಕರೆಲ್ಲ ಪ್ರಾಣಲಿಂಗ ಪ್ರಾಣಲಿಂಗವೆಂಬ ವ್ಯವಹಾರ ಸಂತೆಯ ಪಸರ ! ಅಂಗದ ಆಪ್ಯಾಯನಕ್ಕೆ ಲಿಂಗವ ಹುಡುಕಿ ನೋಡುವ ಭಂಗಿತರ ನೋಡಾ ಕೂಡಲಚೆನ್ನಸಂಗಮದೇವಾ