ಅಷ್ಟದಳಕಮಲದ ಮೇಲಿಪ್ಪ ನಿಶ್ಶೂನ್ಯನ ಮರ್ಮವನರಿಯದೆ ಪ್ರಾಣಲಿಂಗವೆಂದೆಂಬರು ಸಂತೆಯ ಸುದ್ದಿಯ ವಂಚಕರು. ಅಂಗದ ಆಪ್ಯಾಯನಕ್ಕೆ ಲಿಂಗವನರಸುವ ಭಂಗಿತರನೇನೆಂಬೆ ಗುಹೇಶ್ವರಾ.