ಅಷ್ಟವಿಧಾರ್ಚನೆ ಷೋಡಶೋಪಚಾರ ಅರಸರಿಯದ



Pages   (key to Page Status)   


ಅಷ್ಟವಿಧಾರ್ಚನೆ ಷೋಡಶೋಪಚಾರ ಅರಸರಿಯದ ಬಿಟ್ಟಿ ಕಾಣಿ ಭೋ. ಸಗುಣ ನಿರ್ಗುಣ [ಸ್ಥೂಲ] ಸೂಕ್ಷ್ಮ ಅವು ನಿಮ್ಮನರಿವುವೆ ? ಕನ್ನಡಿಯೊಳಗಣ ಪ್ರತಿಬಿಂಬದಂತೆ
ಅವು ತಮ್ಮ ತಾವರಿಯವು. ಅವ ಭಿನ್ನಭಾವದಿಂದರಸಲುಂಟೆ ಕೂಡಲಚೆನ್ನಸಂಗಮದೇವ ತಾನು ತಾನಾದ ಬಳಿಕ ?