ಆಗುವುದಯ್ಯಾ ನಿರಾಭಾರಿಗಳ ತೀರ್ಥ ಜಗದ್ವಂದ್ಯವಾಗಿ; ಆಗುವುದಯ್ಯಾ ಪೀಳಾಧಿಕಾರಿಗಳ ತೀರ್ಥ ಜಗನ್ಮಾನ್ಯವಾಗಿ ಆಗುವುದಯ್ಯಾ ದೇಶಿಕರ ತೀರ್ಥ ದೇಶಿಕರೂಪಾಗಿ ದೇಶಿಕನಾಗಿ ಉಪದೇಶಪ್ರಸಾದಮುಖಿಯಾಗದಿರಬಾರದು ಕ್ರಿಯಾವಂತ ಶರಣಂಗೆ ಕಾಣಾ_ಕೂಡಲಚೆನ್ನಸಂಗಮದೇವಾ.