ಆಚಾರದುಂದುಭಿಯನೇನೆಂದು ಭಾವಿಸುವೆ, ಬೆಳಗಿನೊಳಗೆ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಆಚಾರದುಂದುಭಿಯನೇನೆಂದು ಭಾವಿಸುವೆ
ಬೆಳಗಿನೊಳಗೆ ತೊಳಗುತ್ತಿರ್ದೆನು. ಅರಿವಿನಾಚರಣೆಯ ತೆರನ ಪೇಳುತಿರ್ದೆನು ಭೇದಾಭೇದದೊಳಗಣ ಮಹಾಘನ ಸ್ಫಟಿಕದ ಗಿರಿಯ ತಟದಲ್ಲಿ ನಿಂದರೆ ಘಟಹೊಳೆವುದು ಒಳಗೆ ಹೊರಗೆನ್ನದೆ. ಪರುಷದ ಗಿರಿಯ ಕಡಿಯಲೆಂದು ಹೋದರಾ ಹಿಡಿದುಳಿ ಕೊಡತಿ ಪರುಷವಾದ ಬಳಿಕಾಚಾರ ಮಾಣಿಕ್ಯವ ಹಿಡಿದವನ ಕೈ ಸೆಕೆ ಹತ್ತುವದೆ ? ಲಿಂಗ ಜಂಗಮ ಪ್ರಸಾದವೆಂದರಿದಂಗಾಚಾರ ಸಂಪಗೆಯ ಪುಷ್ಪದಲ್ಲಿ ಕಂಪುಂಡ ಭ್ರಮರನಂತೆ ಕೂಡಲಚೆನ್ನಸಂಗನ ಶರಣಂಗಾಯಿತ್ತಾಚಾರ