ಆಚಾರಲಿಂಗಮೋಹಿತನಾದಡೆ ಸಖೀಸಹೋದರಮೋಹವ ಮರೆಯಬೇಕು.


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಆಚಾರಲಿಂಗಮೋಹಿತನಾದಡೆ ಸಖೀಸಹೋದರಮೋಹವ ಮರೆಯಬೇಕು. ಆಚಾರಲಿಂಗಭಕ್ತನಾದಡೆ
ಪೂರ್ವಾಚಾರವ ನಡೆಯಲಾಗದು. ಆಚಾರಲಿಂಗಪೂಜಕನಾದಡೆ
ಅನ್ಯಪೂಜೆಯ ಮಾಡಲಾಗದು. ಆಚಾರಲಿಂಗವೀರನಾದಡೆ
ಹಿಡಿದ ವ್ರತನೇಮವ ಬಿಡಲಾಗದು. ಆಚಾರಲಿಂಗಪ್ರಸಾದಿಯಾದಡೆ
ಅಶುಚಿಯಾಗಿರಲಾಗದು. ಆಚಾರಲಿಂಗಪ್ರಾಣಿಯಾದಡೆ
ಭಕ್ತನಿಂದೆಯ ಕೇಳಲಾಗದು. ಇದು ಕಾರಣ_ಕೂಡಲಚೆನ್ನಸಂಗಯ್ಯನಲ್ಲಿ ಈ ಆರುಸಹಿತ ಆಚಾರಲಿಂಗ ಭಕ್ತಿ.