ಆಚಾರವುಳ್ಳಡೆ
ಗುರು
ಆಚಾರವುಳ್ಳಡೆ
ಲಿಂಗ
ಆಚಾರವುಳ್ಳಡೆ
ಜಂಗಮ
ಆಚಾರವುಳ್ಳಡೆ
ಪಾದೋದಕ
ಆಚಾರವುಳ್ಳಡೆ
ಪ್ರಸಾದ
ಆಚಾರವುಳ್ಳಡೆ
ಸದ್ಭಕ್ತ
ಆಚಾರವುಳ್ಳಡೆ
ದಾಸೋಹ.
ಆಚಾರವಿಲ್ಲದಿದ್ದಡೆ
ಗುರುವಲ್ಲ
ನರನು
ಆಚಾರವಿಲ್ಲದಿದ್ದಡೆ
ಲಿಂಗವಲ್ಲಾ
ಶಿಲೆ
ಆಚಾರವಿಲ್ಲದಿದ್ದಡೆ
ಜಂಗಮನಲ್ಲ
ವೇಷಧಾರಿ
ಆಚಾರವಿಲ್ಲದಿದ್ದಡೆ
ಪಾದೋದಕವಲ್ಲ
ನೀರು
ಆಚಾರವಿಲ್ಲದಿದ್ದಡೆ
ಪ್ರಸಾದವಲ್ಲ
ಅಶನ
ಆಚಾರವಿಲ್ಲದಿದ್ದಡೆ
ಭಕ್ತನಲ್ಲ
ಭೂತಪ್ರಾಣಿ
ಆಚಾರವಿಲ್ಲದಿದ್ದಡೆ
ದಾಸೋಹದ
ಮನೆಯಲ್ಲ
ವೇಶಿಯ
ಗುಡಿಸಲು.
ಇದು
ಕಾರಣ
ಕೂಡಲಚೆನ್ನಸಂಗಯ್ಯಾ
ಆಚಾರವಿಲ್ಲದವರಿಗೆ
ನಾಯಕನರಕ
ತಪ್ಪದು