ಆಚಾರವೆ ಸ್ವರೂಪವಾದ ಕುರುಹಿನ ಅಂಗವಿಡಿದು ಅಂಗ ಅನಂಗವೆಂಬವೆರಡನೂ ಹೊದ್ದದ ಮಹಿಮ ನೀನು ನೋಡಾ
ಚೆನ್ನಬಸವಣ್ಣಾ ! ಅಂಗವೆ ಆಚಾರವಾಗಿ ಇರಬಲ್ಲೆ ಆಚಾರವೆ ಅಂಗವಾಗಿ ಇರಬಲ್ಲೆಯಾಗಿ ಅಂಗವಿಲ್ಲದ ಅಪ್ರತಿಮನು ನೀನು ನೋಡಾ. ಆಚಾರವೆ ಆಯತ ಆಚಾರವೆ ಸ್ವಾಯತ ಆಚಾರವೆ ಸನ್ನಿಹಿತ ಆಚಾರವೆ ಪ್ರಾಣವಾಗಿಪ್ಪೆಯಾಗಿ ಎನ್ನ ಗುಹೇಶ್ವರಲಿಂಗದಲ್ಲಿ ನಿನ್ನ ಆಚಾರ ಭಿಕ್ಷವನಿಕ್ಕು ಚೆನ್ನಬಸವಣ್ಣಾ.