ಆದಿಯನರಿಯರು ಅನಾದಿಯನರಿಯರು ಒಂದರೊಳಗಿಪ್ಪ ಎರಡನರಿಯರು ಎರಡರೊಳಗಿಪ್ಪ ಮೂರರ ಕೀಲನರಿಯರು ಮೂರರ ಸಂದು ಆರಾದುದನರಿಯರು. ಆರೆಂದು ನುಡಿವ ಗಾರು ಮಾತು ತಾನಲ್ಲ ಗುಹೇಶ್ವರ[ನ] ನಿಲವನರಿದಡೆ _ಒಂದೂ ಇಲ್ಲ. ಅರಿಯದಿರ್ದಡೆ ಬಹುಮುಖವಯ್ಯಾ.