ಆದಿಯಾಧಾರದಲ್ಲಿ ಆದಿಲಿಂಗವ ಕಂಡೆನಯ್ಯ. ಆದಿಲಿಂಗದ ಸಂಧಾನದ ಭೇದಾದಿಭೇದದಿಂದ ಮೂಲ ಪ್ರಣವವ ತಿಳಿದು ನಾದ ಬೆಳಗಿನ ಕಳೆಯ ನೋಡಿ ಕಂಡೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.