ಆದಿಯಾಧಾರವಿಲ್ಲದ ಮುನ್ನ, ಮುನ್ನ,


Title vachana saahitya
Author ಷಣ್ಮುಖಸ್ವಾಮಿ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಆದಿಯಾಧಾರವಿಲ್ಲದ ಮುನ್ನ
ನಾದಬಿಂದುಕಳೆಗಳಿಲ್ಲದ ಮುನ್ನ
ಭೇದಾಭೇದ ಬ್ರಹ್ಮಾಂಡಕೋಟಿಗಳಿಲ್ಲದ ಮುನ್ನ
ಬಸವನೆಂಬ ಬೀಜದ ಮಧ್ಯದಲ್ಲಿ ಲಿಂಗವೆಂಬ ಅಂಕುರ ಉದಯವಾಯಿತ್ತು. ಆ ಲಿಂಗಾಂಕುರವೆ ಸಕಲತತ್ವ ತೋರಿಕೆಯೆಂಬ ಶಾಖೆ ಪರ್ಣಂಗಳು ಪಸರಿಸಿ
ವೃಕ್ಷ ಪಲ್ಲವಿಸಿತ್ತು
ಇಂತಪ್ಪ ಚಿದ್‍ಬ್ರಹ್ಮವೃಕ್ಷವೆಂಬ ಪರಮಗುರು ಸಂಗನಬಸವಣ್ಣನ ಶ್ರೀಪಾದಕಮಲದಲ್ಲಿ ಭ್ರಮರನಾಗಿರಿಸಯ್ಯಾ ಅಖಂಡೇಶ್ವರಾ.