ಆದಿಯೊಳಗೆ ಆಧಾರವಿಪ್ಪುದ ಕಂಡೆನಯ್ಯ. ಆಧಾರದೊಳಗೆ ಆದಿಯಿಪ್ಪುದ ಕಂಡೆನಯ್ಯ. ಆದಿ ಆಧಾರವ ನುಂಗಿ ಆಧಾರ ಆದಿಯ ನುಂಗಲು ಸಾಧ್ಯಸಾಧಕ ಪೂಜ್ಯಪೂಜಕ ದೇವ ದೇಹಿಕನೆಂಬವರಾರೂ ಇಲ್ಲದ ಎರಡಿಲ್ಲದ ನಿರಾಳ ನೀನೇ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.