ಆದಿಯ ಪ್ರಸಾದವ ಕೊಂಬಡೆ ಆತ್ಮದ್ರೋಹಿ ಗುರುಪ್ರಸಾದವ ಕೊಂಬಡೆ ಗುರುದ್ರೋಹಿ ಲಿಂಗ ಪ್ರಸಾದವ ಕೊಂಬಡೆ ಲಿಂಗದ್ರೋಹಿ ಜಂಗಮ ಪ್ರಸಾದವ ಕೊಂಬಡೆ ಜಂಗಮದ್ರೋಹಿ ಸಮಯ ಪ್ರಸಾದವ ಕೊಂಬಡೆ ಭಾವವಳಿಯದಾಗಿ ಕೂಡಲಚೆನ್ನಸಂಗ[ನೆಂಬ] ಹಿರಿಯನ ಹಿರಿಯ ಮಗ ಸಂಗನಬಸವಣ್ಣನ ಪ್ರಸಾದಕ್ಕೆ ನಾನೆಂಬ ಓಗರ