ಆದಿ ಮಧ್ಯ ಅವಸಾನವಿಲ್ಲದುದ ವೇದಿಸುವಡೆ ವೇದ್ಯಂಗರಿದು ಸಾಧಿಸುವ ಸಾಧಕಂಗಲ್ಲದೆ. ವಾದಿಯಲ್ಲ ಪರವಾದಿಯಲ್ಲ ಸಾಧಕನಲ್ಲ ಧರ್ಮದ ಬೋಧಕನಲ್ಲ. ಗಡಣವಿಲ್ಲದ ನುಡಿಯನು ಎಡಬಲನೆಂದರಿಯನು ನಿಸ್ಸಂಗಿ ಶೂನ್ಯಸ್ಥಾನದಲ್ಲಿ ಸುಖಿಯಾಗಿಪ್ಪನು. ದೇವನಲ್ಲ ಮಾನವನಲ್ಲ ಕೂಡಲಚೆನ್ನಸಂಗನಲ್ಲಿ ಸಯವಾದ ಲಿಂಗೈಕ್ಯನು.