ಆದಿ ಲಿಂಗ, ಅನಾದಿ ಜಂಗಮವು, ಆ ಜಂಗಮಕ್ಕೆ ಮಾಡಿದಡೆ ಪರಮಾನಂದ ಸುಖವಯ್ಯಾ. ಗುರುವಿಂಗೆ ಪರಮಗುರು ಜಂಗಮವೆಂದುದು ಕೂಡಲಸಂಗಯ್ಯನ ವಚನ. ಆದಿ ಲಿಂಗ ಅನಾದಿ ಜಂಗಮವು ಆ ಜಂಗಮಕ್ಕೆ ಮಾಡಿದಡೆ ಪರಮಾನಂದ ಸುಖವಯ್ಯಾ. ಗುರುವಿಂಗೆ ಪರಮಗುರು ಜಂಗಮವೆಂದುದು ಕೂಡಲಸಂಗಯ್ಯನ ವಚನ.