ಆಧಾರದಲ್ಲಿ ಅಭವನು ಸ್ವಾಯತ ಸ್ವಾದಿಷ್ಠಾನದಲ್ಲಿ ರುದ್ರನು ಸ್ವಾಯತ ಮಣಿಪೂರಕದಲ್ಲಿ ಮೃಡನು ಸ್ವಾಯತ ವಿಶುದ್ಧಿಯಲ್ಲಿ ಸದಾಶಿವನು ಸ್ವಾಯತ. ಆಜ್ಞಾಚಕ್ರದಲ್ಲಿ ಶಾಂತ್ಯಾತೀತನು ಸ್ವಾಯತ. ಗುಹೇಶ್ವರಲಿಂಗವು ವ್ಯೋಮ ವ್ಯೋಮವ ಕೂಡಿದಂತೆ !