ಆಧಾರ ಲಿಂಗ ನಾಭಿ ಹೃದಯ ಕÀಂಠ ಭ್ರೂಮಧ್ಯದ ಮೇಲೆ ನಿಂದುದದೇನೊ? ನಿತ್ಯ ನಿರಂಜನ ನಿರುಪಾಧಿಕರೇಖೆಯಾಗಿ ಇರ್ದುದದೇನೊ? ವಿದ್ರುಮಕುಸುಮಚಕ್ಷು ಪರಿಮಳದಿಂದತ್ತತ್ತಲೆ_ ಗುಹೇಶ್ವರನೆಂಬುದದೇನೊ?