ಆನು ನೀನೆಂಬ ಮೋಹವೆಲ್ಲಿಯದು ಭಾವ ನಿರ್ಭಾವವೆಂಬ ಪ್ರಸಂಗವೆಲ್ಲಿಯದು ಹೇಳಾ ! ಮನಲೀಯ ಮನಲೀಯ ಉಭಯಭಾವರಹಿತ ಕೂಡಲಚೆನ್ನಸಂಗಾ ಲಿಂಗೈಕ್ಯವು.