ಆಯತ ಪ್ರಸಾದಿ ಸ್ವಾಯತ ಪ್ರಸಾದಿ ಸನ್ನಿಹಿತ ಪ್ರಸಾದಿ ಸಮಯಭೋಗ ಪ್ರಸಾದಿ. ಪ್ರಸಾದವೆ ಪ್ರಾಣವಾಗಿ ಪ್ರಸಾದವು ಪ್ರಸಾದಿಯನೆ ಅವಗ್ರಹಿಸಿಕೊಂಡಿಪ್ಪುದು ಪ್ರಸಾದವೂ ಪ್ರಸಾದಿಯೂ ಏಕವಾಗಿದ್ದಡಾನು ನಮೋ ನಮೋಯೆಂಬೆ ಕೂಡಲಚೆನ್ನಸಂಗಮದೇವಾ