ಆ ಲಿಂಗವೆ ಅಮಳೋಕ್ಯವಾದ ಬಳಿಕ ಆ ಲಿಂಗವೆ ಮುಖಸೆಜ್ಜೆಯಾದ ಬಳಿಕ ಆ ಲಿಂಗವೆ ಭುಜಂಗನಾಗವಟ್ಟಿಗೆಯಾದ ಬಳಿಕ ಆ ಮಹಿಮನೆ ಪ್ರಾಣನಾಥನಾದ ಬಳಿಕ ಇದಿರಿಟ್ಟು ಕೇಳಲುಂಟೆ ? ಅಂಗಲಿಂಗಸಂಬಂಧಿ ಶಿವಶರಣರ ಅಂಘ್ರಿಯಲ್ಲಿ ಇರಿಸಾ ಎನ್ನ ಕೂಡಲಚೆನ್ನಸಂಗಮದೇವಾ.