ಆ ಸತ್ತು ಆ ಚಿತ್ತು ಆ ಆನಂದಾದಿಗಳಿಲ್ಲದಂದು ಸಚ್ಚಿದಾನಂದ ಪರಬ್ರಹ್ಮ ನೀನೆಯಾಗಿ ಎಲ್ಲಾ ತತ್ವಂಗಳಿಗೆ ನೀನಾದಿಯಾಗಿ ನಿನಗೊಂದಾದಿಯಿಲ್ಲದೆ ನೀ ನಿರಾದಿಯಾದಕಾರಣ ನಿನ್ನ ನಿಃಕಲಶಿವತತ್ವವೆಂದರಿದೆನು ನೋಡಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.