ಇನಿಗಬ್ಬಿನೊಳಗಿನ ತನಿರಸವನರಿಯದೆ ಸೋಗೆಯ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಇನಿಗಬ್ಬಿನೊಳಗಿನ ತನಿರಸವನರಿಯದೆ ಸೋಗೆಯ ಹೊರಗಿನ ರವದಿಯ ಸವಿದು ಸಂತಸಬಡುವ ಮೇಷದಂತೆ
ಅಂತರಂಗದ ಆತ್ಮತೀರ್ಥವನುಳಿದು ಹೊರಗಿನ ಜಡಭೌತಿಕತೀರ್ಥವ ಬೆದಕಿ ಬೆಂಡಾಗಿ ಹಲವೆಡೆಗೆ ಹರಿವ ನರಗುರಿಗಳು ಕೈಸೇರಿದ ರತ್ನವನೊಗೆದು ಕಾಜಿನ ಗುಂಡನು ಕೊಂಡ ಮರುಳನಂತಾಗಿಪ್ಪರು ನೋಡಾ ! ಆತ್ಮತೀರ್ಥಂ ಸಮುತ್ಸೃಜ್ಯ ಬಹಿಸ್ತೀರ್ಥಾಣಿ ಯೋ ವ್ರಜೇತ್ ಕರಸ್ಥಂ ಸುಮಹಾರತ್ನಂ ತ್ಯಕ್ತ್ವಾ ಕಾಚಂ ವಿಮಾರ್ಗತೇ ಎಂದುದಾಗಿ
ಕೂಡಲಚೆನ್ನಸಂಗಮದೇವಾ
ನಿಮ್ಮ ನಿಲವಿನ ಗುರುಲಿಂಗಜಂಗಮವೆ ಎನ್ನ ಸ್ವರೂಪವೆಂದರಿದೆನಾಗಿ ಆ ಗುರುಲಿಂಗಜಂಗಮದ ಪಾದೋದಕವೆ ಆತ್ಮತೀರ್ಥವಾಗಿಪ್ಪುದು ಕಾಣಾ. ಅಂತಪ್ಪ ಆತ್ಮತೀರ್ಥವ ಪಡೆದು ಪರಮಪವಿತ್ರನಾಗಿಪ್ಪೆನು.